ಉರಿಯೂತದಿಂದಾಗಿ ಯೋನಿಮುಖದ ಪ್ರದೇಶವೆಲ್ಲ ಬಾತು, ಕೆಂಪಾಗಿ ಒಸರುವಿಕೆ ಕಾಣಿಸಿಕೊಳ್ಳುತ್ತದೆ. ಉರಿತ ಮತ್ತು ತುರಿಕೆಯಿದ್ದು, ಆ ಭಾಗವನ್ನು ಮುಟ್ಟಿದರೆ ನೋವಾಗುತ್ತಿರುತ್ತದೆ. == ಸೋಂಕಿನ ಲಕ್ಷಣಗಳು == ಯೋನಿಮುಖದ ಉರಿತವು ಗುಂಜೆಲುದಿಮ್ಮು ಹಾಗೂ ಹಿರಿಯ ಯೋನಿದುಟಿಗಳ ರೋಮಕೋಶಿಕೆಯುರಿತ, ಕೀವು ಗುಳ್ಳೆಪಡೆ, ತೀಡು ಗಳಲೆಗಳಿಂದಾಗಿ ಕಾಣಿಸಿಕೊಳ್ಳಬಹುದು. ಯೋನಿಯ ಮೈಜಿಡ್ಡಿನ ಜಿಟ್ಟಿಯ ಅಥವಾ ಗಾಯಗಳ ಸೋಂಕಿನಿಂದಾಗಿ ಅಥವಾ ವಿವಿಧ ರತಿರೋಗಗಳ ಲಕ್ಷಣಗಳಲ್ಲೊಂದಾಗಿ ಕಾಣಿಸಿಕೊಳ್ಳಬಹುದು. ಚಿಕ್ಕ ಮಕ್ಕಳಲ್ಲಿ ಅಥವಾ ಮುಪ್ಪಿನಲ್ಲಿ ಕಂಡುಬರುವ ಯೋನಿಮುಖದುರಿತ ಸಂಕೀರ್ಣದ ಭಾಗವೆನಿಸಿ ಕಾಣಿಸಬಹುದು. ಯೋನಿಮುಖದಲ್ಲಿನ ಮೂತ್ರನಾಳ ಬದಿಯ ಅಥವಾ ಮೂತ್ರನಾಳದಡಿಯ ಬಾರ್ಥೊಲಿನ್ ಗ್ರಂಥಿಗಳ ಸೋಂಕು ಕಾರಣವಾಗಿರಬಹುದು. ಮಣಿಮಾಲಣಬೆ ಬೇನೆ, ಲೋಮಕುಂಟಿ ಬೇನೆಗಳೂ ಯೋನಿಮುಖದುರಿತದ ಸಹಭಾಗಿಗಳು. ಯೋನಿಮುಖದ ಚರ್ಮವು ಉರಿಗೆಂಜ, ಸಿಬ್ಬು ಮೊದಲಾದ ಸೋಂಕುಗಳಿಂದಲೂ ಬಾಧಿತವಾಗಬಹುದು. == ಸೋಂಕು ನಿವಾರಿಸುವ ಬಗ್ಗೆ == ಮರ್ಮಭಾಗವನ್ನು ಸ್ವಚ್ಛವಾಗಿತ್ತುಕೊಳ್ಳುಬೇಕು. ಸ್ವಚ್ಛವಾದ ಒಳ ಉಡುಪುಗಳನ್ನು ಧರಿಸುವುದು. ಮುಟ್ಟಿನ ಸಮಯದಲ್ಲಿ ಹಾಗೂ ಬಿಳಿಸೆರಗು, ಅಥವಾ ಬೇರಾವುಕದೇ ಯೋನಿಯುರಿತವಿದ್ದಲ್ಲಿ ಈ ಒಳಸ್ವಚ್ಛತೆಯನ್ನು ಕಾದಿಟ್ಟುಕೊಳ್ಳುವುದು ರೂಢಿಯಾಗಬೇಕು. ಸೋಂಕು ತಗುಲಿದಾಗ ನಂಜುರೋಧಕ ದ್ರಾವಣಗಳಿಂದ ತೊಳೆದು, ಮೆತ್ತನೆಯ ಬಟ್ಟೆಯಿಂದ ಒಣಗಿಸಬೇಕು. ಸಮಂಜಸವಾದ ಜೀವಿರೋಧಕ ಹಾಗೂ ಬೂಷ್ಟು ರೋಧಕಗಳನ್ನು ಸೋಂದು ತಗುಲಿದ ಭಾಗಕ್ಕೆ ಅಥವಾ ದೇಹದೊಳಬಳಕೆಯಿಂದ ಯೋನಿಮುಖದ ಸೋಂಕುನ್ನು ನಿವಾರಿಸಬಹುದು. ಬೆದೆಜನಕದ ಕೊರತೆಯಿಂದಾಗೆ ಮಕ್ಕಳಲ್ಲಿ ಮತ್ತು ಮುಪ್ಪಿನವರಲ್ಲಿ ಈ ಉರಿ ಕಂಡು ಬಂದರೆ ಬೆದೆಜನಕದಿಂದ ಕೂಡಿದ ಮುಲಾಮು, ಮಾತ್ರೆಗಳನ್ನು ಕೆಲವು ವಾರೆ ಉಪಯೋಗಿಸಬಹುದು. == ಉಲ್ಲೇಖ ==